ಒಳ್ಳೆಯವರಿಗೆ ಕೆಡುಕು ಹೇಗೆ ಸಂಭವಿಸಬಹುದು ಎಂಬುದರ ಬಗ್ಗೆ ಪರಿಶೀಲನೆ ಮತ್ತು ಬದುಕಿನ
ಒಳ್ಳೆಯವರಿಗೆ ಕೆಡುಕು ಹೇಗೆ ಸಂಭವಿಸಬಹುದು ಎಂಬುದರ ಬಗ್ಗೆ ಪರಿಶೀಲನೆ ಮತ್ತು ಬದುಕಿನ ಕಷ್ಟಕೋಟಲೆಗಳನ್ನು ವ್ಯಾವಹಾರಿಕವಾಗಿ ಎದುರಿಸುವುದರ ಬಗೆಗಿನ ಒಂದು ಒಳನೋಟ.

ಸದ್ಗುರು ಬೋಧಿನಾಥ ವೇಲನ್‍ಸ್ವಾಮಿ

English |
Tamil |
Marathi |
Kannada |
Spanish |
Hindi |

ಹಲವು ವರ್ಷಗಳಿಂದ ನಾನು ಬದುಕಿನ ನಿಷೇಧಾತ್ಮಕ ಘಟನೆಗಳನ್ನು ಅಂಗೀಕರಿಸಲು ಸಾಧ್ಯವಾಗದ ಹಲವಾರು ಹಿಂದೂಗಳನ್ನು ಭೇಟಿ ಮಾಡಿದ್ದೇನೆ. “ನಮ್ಮ ಕುಟುಂಬ ಧಾರ್ಮಿಕ ಮತ್ತು ಕರ್ತವ್ಯನಿಷ್ಠವಾದ ಜೀವನವನ್ನು ನಡೆಸುತ್ತಿದೆ. ಆದ್ದರಿಂದ ಈ ಎಲ್ಲ ನಿಷೇಧಾತ್ಮಕ ಘಟನೆಗಳು ನಮ್ಮ ಬದುಕಿನಲ್ಲಿ ನಡೆಯಬಾರದಾಗಿತ್ತು. ನಮಗೆ ಹೀಗೆ ಆಗಬಾರದಾಗಿತ್ತು” ಎಂದು ಅವರು ದುಃಖಿಸುತ್ತಾರೆ. ಕೆಲವೊಂದು ವಿಪರೀತದ ಸಂದರ್ಭಗಳಲ್ಲಿ,” ದೇವರು ಹೀಗಾಗಲು ಬಿಟ್ಟನೇಕೆ? ” ಎಂಬ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಅವರ ವಿಶ್ವಾಸ ಕುಗ್ಗುತ್ತದೆ. ನಾನು ಕೊಡುವ ಉತ್ತರ – ಹಿಂದೂ ಪರಿಭಾಷೆಯಾದ ಕರ್ಮ ಅವರ ಸಂದಿಗ್ಧತೆಯನ್ನು ವಿವರಿಸುತ್ತದೆ. ಕರ್ಮವನ್ನು ನಮ್ಮ ​​ಅಂತರ್ಜಾಲದ ನಿಘಂಟಿನಲ್ಲಿ ಹೀಗೆ ವ್ಯಾಖ್ಯಾನಿಸಲಾಗಿದೆ:

ಕರ್ಮ: “ಕ್ರಿಯೆ,” “ಕಾರ್ಯ.” ಹಿಂದೂ ಚಿಂತನೆಯ ಪ್ರಮುಖವಾದ ತತ್ವಗಳಲ್ಲಿ ಒಂದಾದ ಕರ್ಮ (1) ಯಾವುದೇ ಕ್ರಿಯೆ ಅಥವಾ ಕಾರ್ಯವನ್ನು (2) ಕಾರಣ ಮತ್ತು ಪರಿಣಾಮದ ತತ್ವವನ್ನು (3) ಪರಿಣಾಮ ಅಥವಾ “ಕ್ರಿಯೆಯ ಫಲ”ವನ್ನು (ಕರ್ಮಫಲ) ಅಥವಾ “ಅನಂತರದ-ಪರಿಣಾಮ” (ಉತ್ತರಫಲ)ವನ್ನು ಸೂಚಿಸುತ್ತದೆ. ಆ ಕಾರ್ಯವನ್ನು ಮಾಡಿದವನಿಗೆ ಎಂದೋ ಒಂದು ದಿನ ಅದರ ಫಲ ಹಿಂದಿರುಗಿ ಬರುತ್ತದೆ. ನಾವು ಬಿತ್ತಿದ ಬೀಜದ ಬೆಳೆಯನ್ನು ಈ ಜನ್ಮದಲ್ಲಿಯೇ ಅಥವಾ ಮುಂದಿನ ಜನ್ಮದಲ್ಲಿ ನಾವು ಕೊಯ್ಯುತ್ತೇವೆ. ಸ್ವಾರ್ಥ ಅಥವಾ ಹಗೆತನದ ಕೃತ್ಯಗಳು (ಪಾಪಕರ್ಮ ಅಥವಾ ಕುಕರ್ಮ) ದುಃಖವನ್ನು ತರುತ್ತವೆ. ಪರೋಪಕಾರದ ಕೃತ್ಯಗಳು (ಪುಣ್ಯಕರ್ಮ ಅಥವಾ ಸುಕರ್ಮ) ಹಿತಕರವಾದ ಪ್ರತಿಕ್ರಿಯೆಗಳನ್ನು ತರುತ್ತವೆ. ಗುರುತ್ವವು ಬಾಹ್ಯ ಜಗತ್ತಿನ ನಿರಾಕಾರ ಕಾನೂನಾಗಿರುವಂತೆ, ಕರ್ಮವು ಆಂತರಿಕ ಜಗತ್ತಿನ ತಟಸ್ಥ, ತನ್ನನ್ನು ತಾನೇ ಶಾಶ್ವತೀಗೊಳಿಸಿಕೊಳ್ಳುವ ಕಾನೂನಾಗಿದೆ.
 
ವ್ಯಕ್ತಿ ಎಸಗಿದ ಕ್ರಿಯೆಗಳಿಗೆ ಭಗವಂತ ಪ್ರತಿಫಲ ಮತ್ತು ಶಿಕ್ಷೆಯನ್ನು ನೀಡುತ್ತಾನೆ ಎಂದು ಕೆಲವು ಧರ್ಮಗಳು ಬೋಧಿಸುತ್ತವೆ. ಆದರೆ, ಕರ್ಮದ ಕಾನೂನು ಅದನ್ನು ನಿಭಾಯಿಸುತ್ತದೆ ಎಂದು ಹಿಂದೂ ಧರ್ಮ ವಿವರಿಸುತ್ತದೆ. ಕರ್ಮವನ್ನು ಕಂಪ್ಯೂಟರ್ ತಂತ್ರಾಂಶ ಅಥವಾ ಕಂಪ್ಯೂಟರ್ ಆಟಕ್ಕೆ ಹೋಲಿಸಲು ನಾನು ಇಷ್ಟಪಡುತ್ತೇನೆ. ದೇವರು ಒಂದು ತಂತ್ರಾಂಶವನ್ನು ರಚಿಸಿ ಅದನ್ನು ವಿಶ್ವದಲ್ಲಿ ಸ್ಥಾಪಿಸಿದ. ಸಂಭವನೀಯವಾದ ಎಲ್ಲ ಮಾನವ ಕಾರ್ಯಗಳು ಮತ್ತು ಅನುಗುಣವಾದ “ಕ್ರಿಯೆಗಳ ಫಲಗಳ”ನ್ನು ಆ ತಂತ್ರಾಂಶ ಒಳಗೊಂಡಿದೆ.
 
ಹಿಂದಿನ ಜನ್ಮದ ನಮ್ಮ ಕಾರ್ಯಗಳು ಕರ್ಮ ಫಲಗಳನ್ನು ಸೃಷ್ಟಿಸಿವೆ. ಅವುಗಳಲ್ಲಿ ಕೆಲವನ್ನು ನಾವು ಈ ಜನ್ಮದಲ್ಲಿ ಅನುಭವಿಸಬೇಕಾಗಿದೆ. ದೊಡ್ಡದೊಂದು ಆಯಸ್ಕಾಂತ ನಮ್ಮೊಳಗಿದೆಯೇನೋ ಎನ್ನುವಂತೆ ರಚನಾತ್ಮಕ ಮತ್ತು ನಿಷೇಧಾತ್ಮಕ ಈ ಎರಡೂ ಅನುಭವಗಳೂ ನಮ್ಮಿಂದ ಸೆಳೆಯಲ್ಪಡುತ್ತವೆ. ಉತ್ತಮವಾದ, ಧಾರ್ಮಿಕ ಜೀವನವನ್ನು ಈ ಜನ್ಮದಲ್ಲಿ ನಡೆಸುವುದರಿಂದ ಮಾತ್ರವೇ ನಾವು ಪೂರ್ವ ಜನ್ಮದಲ್ಲಿ ಮಾಡಿದ ನಿಷೇಧಾತ್ಮಕ ಕರ್ಮ ಫಲಗಳನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗುವುದಿಲ್ಲ. ಆದರೂ, ಸ್ವಾರ್ಥರಹಿತವಾದ ಕರ್ಮ (ಸೇವೆ) ನಾವು ಇನ್ನೂ ಅನುಭವಿಸದ, ಪೂರ್ವ ಜನ್ಮದಲ್ಲಿ ಮಾಡಿದ ಘೋರ ಕರ್ಮಗಳ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ.

ನಿಷೇಧಾತ್ಮಕ ಘಟನೆಗಳು ನ್ಯಾಯವಾದುವೆಂದು ಅಂಗೀಕರಿಸದಿದ್ದರೆ, ನಾವು ವ್ಯಾಕುಲಗೊಳ್ಳುತ್ತೇವೆ ಮತ್ತು ವಿಚಲಿತರಾಗುತ್ತೇವೆ. ಇದು ಅಪಾರ ಮಾನಸಿಕ ತುಮುಲವನ್ನು ಉಂಟುಮಾಡುತ್ತದೆ. ನಡೆಯುತ್ತಿರುವುದೆಲ್ಲ ನಾವಾಗಿಯೇ ಮಾಡಿಕೊಂಡದ್ದು ಎಂಬುದನ್ನು ನಾವು ಒಪ್ಪಿಕೊಂಡರೆ, ತುಮುಲ ಮತ್ತು ವ್ಯಾಕುಲತೆ ಕ್ರಮೇಣ ಮಾಯವಾಗಬಹುದು.

ನಿಷೇಧಾತ್ಮಕ ಘಟನೆಯಲ್ಲಿ ಭಾಗಿಯಾದವರ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಸಾಮಾನ್ಯ ಪ್ರತಿಕ್ರಿಯೆಯಾಗಿದೆ. ಅವರ ಮೇಲೆ ಅಸಮಾಧಾನಗೊಳ್ಳುವುದು ಮತ್ತು ಪ್ರಾಯಶಃ ಸೇಡು ತೀರಿಸಿಕೊಳ್ಳಬೇಕೆಂದು ಯೋಚಿಸುವುದು ಮಾನವ ಸ್ವಭಾವ. ಅಂತಹ ಪ್ರತಿಕ್ರಿಯೆ ಹೆಚ್ಚಿನ ಮಾನಸಿಕ ಬೇಗುದಿಗೆ ಸ್ಪಷ್ಟವಾಗಿ ಕಾರಣವಾಗುತ್ತದೆ. ಜೊತೆಯಲ್ಲಿಈ ಅನುಭವವನ್ನು ಹೊಂದುವುದು ವಿಧಿಲಿಖಿತ, ಇದು ಸ್ವಂತ ನೀವೇ ಸೃಷ್ಟಿಸಿಕೊಂಡ ಕರ್ಮ – “ಕರ್ಮದ ಫಲ”, ಎಂಬ ಪ್ರಮುಖ ಅಂಶವನ್ನು ನೀವು ಗಮನಿಸುವುದಿಲ್ಲ. ಈ ಜನರು ನಿಮ್ಮೊಡನೆ ಈ ರೀತಿ ತಪ್ಪಾಗಿ ವ್ಯವಹರಿಸದಿದ್ದರೆ, ಭವಿಷ್ಯದಲ್ಲಿ ಇತರರು ಹಾಗೆ ಮಾಡುತ್ತಾರೆ. ಗುರುತ್ವದಂತೆ ಕರ್ಮವೂ ಎಂದಿಗೂ ವಿಫಲವಾಗದ ತತ್ವವಾಗಿದೆ; ಅದನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ.

ನನ್ನ ಗುರು, ಶಿವಾಯ ಸುಬ್ರಹ್ಮಣ್ಯಸ್ವಾಮಿ ಬೇರೆಯವರನ್ನು ದೂಷಿಸುವುದನ್ನು ಪ್ರಬಲವಾಗಿ ವಿರೋಧಿಸುತ್ತಿದ್ದರು: “ನಿಮಗೆ ಕೆಡುಕು ಸಂಭವಿಸಿದ್ದಕ್ಕಾಗಿ ನೀವು ಪ್ರತಿ ಬಾರಿಯೂ ಬೇರೊಬ್ಬರನ್ನು ದೂಷಿಸಿದಾಗ, ಅಥವಾ ಯಾವುದೇ ರೀತಿಯಲ್ಲಿ ಆಪಾದಿಸಿದಾಗ, ‘ಇದು ನನ್ನ ಕರ್ಮ. ಇದನ್ನು ನಾನು ಅನುಭವಿಸಲೆಂದೇ ಹುಟ್ಟಿದ್ದೇನೆ. ನನಗೆ ಕೆಡುಕಾಯಿತೆಂದು ಇತರರನ್ನು ದೂಷಿಸಲು ನಾನು ಹುಟ್ಟಿ ಬಂದಿಲ್ಲ. ನನ್ನ ಕರ್ಮವನ್ನು ಅನುಭವಿಸಲು ಆಗದ ಅಸಾಮರ್ಥ್ಯದಿಂದ ಸೃಷ್ಟಿಸಲ್ಪಟ್ಟ ಅಜ್ಞಾನದ ಸ್ಥಿತಿಯಲ್ಲಿ ಬದುಕಲು ನಾನು ಹುಟ್ಟಿ ಬಂದಿಲ್ಲ. ನಾನು ಆಧ್ಯಾತ್ಮಿಕವಾಗಿ ಬಯಲಾಗಲು ಮತ್ತು ನನ್ನ ಈಗಿನ ಹಾಗೂ ಪೂರ್ವ ಜನ್ಮಗಳ ಕರ್ಮಗಳನ್ನು ಒಪ್ಪಿಕೊಂಡು, ಅವುಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಅದ್ಭುತ ರೀತಿಯಲ್ಲಿ ನಿಭಾಯಿಸಲು ಬಂದಿದ್ದೇನೆ’ ಎಂದು ಹೇಳಿಕೊಳ್ಳಿ” ಎನ್ನುತ್ತಿದ್ದರು.

ಬೇರೆಯವರನ್ನು ದೂಷಿಸದೆ ಇರುವುದು ಮೊದಲ ಹೆಜ್ಜೆ. ಎರಡನೆಯದಾಗಿ, ನಿಮ್ಮನ್ನು ಹಿಂಸಿಸಿದವರ ಬಗ್ಗೆ ಯಾವುದೇ ಕೆಟ್ಟ ಭಾವನೆಗಳನ್ನು ಅಳಿಸಲು ನೀವು ತಿರುಕುರಳಿನ ಈ ಉದಾತ್ತ-ಮನಸ್ಸಿನ ಸಲಹೆಯನ್ನು ಅನುಸರಿಸಬಹುದು: “ನಿಮಗೆ ಘಾಸಿ ಉಂಟುಮಾಡಿದವರಿಗೆ ದಯೆಯನ್ನು ತೋರಿದರೆ ಮತ್ತು ಅವೆರಡನ್ನೂ ಮರೆತರೆ, ನಿಮಗೆ ಘಾಸಿ ಉಂಟುಮಾಡಿದವರು ನಾಚಿಕೆಯಿಂದಲೇ ಶಿಕ್ಷಿಸಲ್ಪಡುತ್ತಾರೆ.”
 
ನಿಷೇಧಾತ್ಮಕ “ಕರ್ಮಫಲ” ಅದನ್ನು ಅಂಗೀಕರಿಸುವ ವ್ಯಕ್ತಿಗೆ ಅನುಭವದಿಂದ ಪಾಠ ಕಲಿಯಲು ಅವಕಾಶವನ್ನು ದಯಪಾಲಿಸುತ್ತದೆ. ನಾವು ಹಿಂದೆ ಇತರರೊಡನೆ ವ್ಯವಹರಿಸಿದಂತೆ ಬೇರೆಯವರು ನಮ್ಮೊಡನೆ ನಡೆದುಕೊಳ್ಳುತ್ತಾರೆ. ನಾವು ವ್ಯವಹಾರದಲ್ಲಿ ಭಾಗಿಯಾದವರಿಗೆ ಹಣವನ್ನು ವಂಚಿಸಿದರೆ, ಒಂದಲ್ಲ ಒಂದು ದಿನ ನಮಗೂ ಅದೇ ಅನುಭವ ಉಂಟಾಗುತ್ತದೆ. ಮಾಡಿದ್ದುಣ್ಣೋ ಮಹಾರಾಯ ಎನ್ನುವಂತೆ, ನಾವು ಒಬ್ಬರ ಬಗ್ಗೆ ಅನುಚಿತವಾದ ರೀತಿಯಲ್ಲಿ ನಡೆದುಕೊಂಡರೆ, ಕರ್ಮಫಲ ನಮ್ಮ ಕೃತ್ಯದಿಂದ ಹಾನಿಗೊಳಗಾದವರು ಎಷ್ಟು ನೊಂದಿರುತ್ತಾರೋ, ಅದೇ ಮಟ್ಟದ ನೋವನ್ನು ನಾವೂ ಅನುಭವಿಸುವಂತೆ ನಿರ್ಬಂಧಿಸುತ್ತದೆ. ಅಂಥ ಸಾಕ್ಷಾತ್ಕಾರ ಅತ್ಯಂತ ಅಸಮಾಧಾನವನ್ನು ಉಂಟುಮಾಡಬಹುದು ಮತ್ತು ವಿಚ್ಛಿದ್ರಕಾರಕವಾಗಬಹುದು ಹಾಗೂ ಬೇರೆಯವರನ್ನು ಮತ್ತೆಂದಿಗೂ ವಂಚಿಸದಂತೆ ಪ್ರೇರೇಪಿಸಬಹುದು. ಈ ರೀತಿಯಲ್ಲಿ, ಕರ್ಮ ನಮ್ಮ ಬೋಧಕನಾಗಿ, ನಮ್ಮ ವರ್ತನೆಯ ಪರಿಣಾಮಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಮತ್ತು ಗಮನವಿಟ್ಟು ನಡೆದುಕೊಂಡರೆ, ನಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳುವ ಪಾಠ ಕಲಿಸುತ್ತದೆ.
ನಮ್ಮ ಅನುಭವಗಳಿಂದ ಪಾಠ ಕಲಿಯುವುದರ ಪ್ರಾಮುಖ್ಯತೆಯ ಬಗ್ಗೆ ಗುರುದೇವ ಮಾತನಾಡುತ್ತಾ, “ಜೀವನದ ಮೂಲಭೂತ ಕಾನೂನುಗಳು ಎಷ್ಟು ಸರಳವಾಗಿವೆ ಎಂದರೆ, ಅನೇಕ ಜನರು ಅವುಗಳನ್ನು ಗಮನಿಸುವುದೇ ಇಲ್ಲ. ಅದೇಕೆ? ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದಿರಲು ನಮಗೆ ಹೇರಳವಾದ ಅವಕಾಶಗಳನ್ನು ದಯಪಾಲಿಸಲಾಗಿರುವುದರಿಂದ, ನಮ್ಮ ಪಾಠಗಳತ್ತ ಗಮನ ಕೊಡದಿರಲು ನಾವು ಉತ್ತಮ ಕಾರಣಗಳನ್ನು ಹುಟ್ಟುಹಾಕುತ್ತೇವೆ. ಈ ಕೆಲವು ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವುದು ಸಾಮಾನ್ಯವೆಂದು ಹೇಳಬಹುದೇ? ಹೌದು, ಶಾಲೆಯಲ್ಲಿ ತೇರ್ಗಡೆ ಹೊಂದಿಲ್ಲ ಎಂದು ವರದಿಯನ್ನು ಪಡೆದಾಗ, ಕೆಲವೊಂದು ಪರೀಕ್ಷೆಗಳಲ್ಲಿ ಉತ್ತೀರ್ಣರಾಗದಿರುವುದರಿಂದ ಆ ಪಠ್ಯವನ್ನು ಮತ್ತೊಮ್ಮೆ ಅಭ್ಯಸಿಸಬೇಕು ಅಲ್ಲವೇ? ನಾವು ನಮ್ಮ ಅನುಭವಗಳಿಂದ ಪಾಠ ಕಲಿಯಬೇಕು ಇಲ್ಲವಾದರೆ ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಿರುತ್ತೇವೆ.”

ಹಿಂದೂಗಳು ನನ್ನನ್ನು ಪದೇ ಪದೇ ಇಂದು ಜಗತ್ತಿನಲ್ಲಿ ಇಷ್ಟೊಂದು ಹಿಂಸೆ ತುಂಬಿರುವುದೇಕೆ ಎಂದು ಪ್ರಶ್ನಿಸುತ್ತಾರೆ. “ಪ್ರಪಂಚದಲ್ಲಿ ಇಷ್ಟೊಂದು ಹಿಂಸೆ ತುಂಬಿದ್ದರೆ ಭಗವಂತ ಅಲ್ಲಿ ಹೇಗಿರುತ್ತಾನೆ?” ಎನ್ನುವುದೇ ಈ ಪ್ರಶ್ನೆಯ ಅರ್ಥ.

ವಿಕಿಪೀಡಿಯಾದ “ನಡೆಯುತ್ತಿರುವ ಸಶಸ್ತ್ರ ಸಂಘರ್ಷಗಳ ಪಟ್ಟಿ” ಎಂಬ ಶೀರ್ಷಿಕೆಯ ಪುಟ ದೊಡ್ಡ, ಮಧ್ಯಮ ಮತ್ತು ಕಿರು ಪ್ರಮಾಣದ 60 ಸಕ್ರಿಯ ಸಂಘರ್ಷಗಳನ್ನು ಒಳಗೊಂಡಿದೆ. ಈ ಸಶಸ್ತ್ರ ಸಂಘರ್ಷಗಳ ಕಾರಣಕ್ಕೂ ದೇವರಿಗೂ ಯಾವುದೇ ಸಂಬಂಧವಿಲ್ಲ. ಇದರ ಸಂಬಂಧವಿರುವುದು ಕೇವಲ ಮನುಕುಲದೊಂದಿಗೆ ಮಾತ್ರ. ದುರದೃಷ್ಟವಶಾತ್ ಭೂಮಿಯ ಮೇಲೆ “ಬುಡಕಟ್ಟು ಪ್ರಜ್ಞೆ” ಹೆಚ್ಚಿನ ಪ್ರಮಾಣದಲ್ಲಿದೆ. ಬುಡಕಟ್ಟು ಪ್ರಜ್ಞೆ ಎಂದರೆ “ಕುಲ ಪ್ರಜ್ಞೆ ಹಾಗೂ ನಿಷ್ಠೆ, ವಿಶೇಷವಾಗಿ ಇತರ ಬುಡಕಟ್ಟಿಗಿಂತಲೂ ನಮ್ಮ ಬುಡಕಟ್ಟು ಹೆಚ್ಚಿನದು” ಎನ್ನುವ ಅಭಿಪ್ರಾಯವನ್ನು ಹೊಂದಿರುವುದು. ಬೇರೆ ಮಾತಿನಲ್ಲಿ ಹೇಳುವುದಾದರೆ, ಸಂಘರ್ಷದಲ್ಲಿ ತೊಡಗಿದ ಜನರು ತಮ್ಮ ಗುಂಪಿನ ನಂಬಿಕೆ, ಸಂಸ್ಕೃತಿ, ಭಾಷೆ, ಮುಂತಾದವುಗಳನ್ನು ಬೇರೆಯವರೂ ಅನುಸರಿಸಬೇಕೆಂದು ಬಯಸುತ್ತಾರೆ. ಬೇರೆ ಜನರ ಜೀವನ ವಿಧಾನಗಳ ಬಗ್ಗೆ ಸಹಿಷ್ಣುತೆ ಇಲ್ಲವಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಇಂದು ಅನೇಕ ದೇಶಗಳು ಬಹುಸಾಂಸ್ಕೃತಿಕ ದೃಷ್ಟಿಯನ್ನು ಪಡೆದಿವೆ. ಇದನ್ನು “ವಿಭಿನ್ನ ಜನಾಂಗೀಯ, ಧಾರ್ಮಿಕ ಅಥವಾ ಸಾಮಾಜಿಕ ಗುಂಪುಗಳ ಸದಸ್ಯರು ತಮ್ಮ ಸಾಂಪ್ರದಾಯಿಕ ಸಂಸ್ಕೃತಿ ಅಥವಾ ವೈಶಿಷ್ಟ್ಯವನ್ನು ಒಂದು ಸಾಮಾನ್ಯ ನಾಗರಿಕತೆಯ ಮಿತಿಯಲ್ಲಿ ಉಳಿಸಿಕೊಂಡು ಬೆಳೆಸುವುದು” ಎಂದು ವಿಶದೀಕರಿಸಬಹುದು.

ಹಿಂಸಾಚಾರ ಮತ್ತು ಯುದ್ಧದ ಘರ್ಷಣೆಗಳಿಗೂ ಭಗವಂತನಿಗೂ ಏನೂ ಸಂಬಂಧ ಇಲ್ಲ ಎನ್ನುವ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು ಎಂದು ನಾನು ಸೂಚಿಸುತ್ತೇನೆ. ಕುಲ ನಿಷ್ಠೆಯಲ್ಲಿ ನಂಬಿಕೆ ಹೊಂದಿರುವ ಜನರಿಂದ ಅವು ಉದ್ಭವಿಸುತ್ತವೆ. ಈ ದೃಷ್ಟಿಕೋನವನ್ನು ಹೊಂದುವುದರಿಂದ ನಾವು ಪ್ರತಿ ದಿನವೂ ಕಾಣುವ ತೀವ್ರವಾಗಿ ನೋವುಂಟುಮಾಡುವ ಘಟನೆಗಳಿಂದಾಗುವ ಮಾನಸಿಕ ತುಮುಲವನ್ನು ನಿವಾರಿಸಿಕೊಳ್ಳಬಹುದು. ನನ್ನ ಗುರು, “ಇದು ಅದ್ಭುತ ಪ್ರಪಂಚ. ಈ ವಿಶ್ವದಲ್ಲಿ ಏನೂ ತಪ್ಪಿಲ್ಲ ಎಂಬ ದೃಷ್ಟಿಕೋನವನ್ನು ಮೊದಲು ಪಡೆದುಕೊಳ್ಳಿ” ಎಂದು ಬೋಧಿಸಿದ್ದಾರೆ.

ಇನ್ನೂ ಎರಡು ಪ್ರಮುಖ ಹಿಂದೂ ದೃಷ್ಟಿಕೋನಗಳು ನಮಗೆ ಜೀವನದ ತೊಂದರೆಗಳನ್ನು ಎದುರಿಸಲು ಸಹಾಯ ಮಾಡುತ್ತವೆ. 1) ಕೆಲವರು ದುಷ್ಟರಾಗಿದ್ದಾರೆ ಮತ್ತು ಇತರರು ಒಳ್ಳೆಯವರಾಗಿದ್ದಾರೆ ಎನ್ನುವ ಪರಿಕಲ್ಪನೆಯನ್ನು ಹಿಂದೂಗಳು ಅಂಗೀಕರಿಸುವುದಿಲ್ಲ. ಪ್ರತಿಯೊಬ್ಬರೂ ಒಂದು ಆತ್ಮ, ಮೂಲಭೂತವಾಗಿ ಒಳ್ಳೆಯತನವನ್ನು ಪಡೆದಿರುವ, ಪರಮಾತ್ಮನ ಅಂಶವನ್ನು ಹೊಂದಿರುವ ದೈವಿಕ ಜೀವ ಎಂದು ಹಿಂದೂಗಳು ನಂಬುತ್ತಾರೆ. 2) ಇಡೀ ಪ್ರಪಂಚವೇ ಒಂದು ಕುಟುಂಬ, “ವಸುದೈವ ಕುಟುಂಬಕಂ”.

ಜಗತ್ತಿನ ಹೆಚ್ಚೂ ಕಡಿಮೆ ಪ್ರತಿಯೊಬ್ಬರೂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರಿಗೂ ಒಳಿತಾಗಬೇಕೆಂಬುದೇ ಎಲ್ಲ ಮಾನವ ಪ್ರಯತ್ನಗಳ ಗುರಿಯಾಗಿದೆ. ಅವರು ಸಂತೋಷವಾಗಿರಬೇಕು, ಯಶಸ್ಸು ಗಳಿಸಬೇಕು ಮತ್ತು ಧಾರ್ಮಿಕವಾಗಿ ಪರಿಪೂರ್ಣರಾಗಬೇಕೆಂದು ನಾವು ಬಯಸುತ್ತೇವೆ. ಸಮುದಾಯವನ್ನು ಸಂಪೂರ್ಣ ವಿಶ್ವವೆಂದು ನಾವು ನಿರೂಪಿಸಿದಾಗ, ಜಗತ್ತಿನ ಪ್ರತಿಯೊಬ್ಬರೂ ಸಂತೋಷವಾಗಿರಬೇಕು ಹಾಗೂ ಅಭಿವೃದ್ಧಿ ಹೊಂದಬೇಕೆಂದು ನಾವು ಬಯಸುತ್ತೇವೆ.

ಅಂತಿಮವಾಗಿ, ಎಂದಿಗೂ ತಪ್ಪದ ಕರ್ಮದ ಕಟ್ಟಳೆಯಂತೆ ಈಗಿನ ಹಾಗೂ ಪೂರ್ವ ಜನ್ಮಗಳ ನಮ್ಮ ಕರ್ಮಫಲದ ಆಕರ್ಷಣೆಯಿಂದಾಗಿ ನಮ್ಮ ಜೀವನದಲ್ಲಿ ನಿಷೇಧಾತ್ಮಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಘಟನೆಗಳು ವ್ಯಾಕುಲತೆ, ಗೊಂದಲ, ಭಗವಂತನ ಅಸ್ತಿತ್ವದ ಬಗ್ಗೆ ಅನುಮಾನ ಮತ್ತು ಇತರರ ದೂಷಣೆಯ ಮೂಲವಾಗಿ ಇರಬೇಕಾಗಿಲ್ಲ. ಬದಲಾಗಿ, ಅದೆಲ್ಲ ನಾವಾಗಿಯೇ ಮಾಡಿಕೊಂಡ ಕರ್ಮವೆಂದು ನಾವು ಅಂಗೀಕರಿಸಬಹುದು. ಬದುಕಿನ ಸಂಕಷ್ಟಗಳಿಂದ ಪಾಠ ಕಲಿತು, ಅದು ಮತ್ತೆ ಪುನರಾವರ್ತನೆಗೊಳ್ಳದಂತೆ ನೋಡಿಕೊಳ್ಳಬಹುದು. ಇನ್ನು ವಿಶ್ವದ ಮಟ್ಟಿಗೆ ಹೇಳುವುದಾದರೆ, ನಡೆಯುತ್ತಿರುವುದನ್ನು ಬುಡಕಟ್ಟು ಪ್ರಜ್ಞೆಯ ಆಚೆ, ಜನಸಾಮಾನ್ಯರಲ್ಲಿ ವಿಶ್ವವ್ಯಾಪಕವಾದ ಬಹುಸಾಂಸ್ಕೃತಿಕ ಪ್ರಜ್ಞೆ ಬೆಳೆಯುತ್ತಿದೆ ಎಂದು ನಾವು ಒಪ್ಪಿಕೊಳ್ಳಬಹುದು. ಪ್ರತಿಯೊಬ್ಬರಲ್ಲೂ ಭಗವಂತನಿದ್ದಾನೆ ಹಾಗೂ ಇಡೀ ಪ್ರಪಂಚ ಒಂದೇ ಕುಟುಂಬ ಎಂಬ ನಮ್ಮ ಹಿಂದೂ ನಂಬಿಕೆಯನ್ನು ನಾವು ಪೂರ್ವಭಾವಿಯಾಗಿ ಹಂಚಿಕೊಳ್ಳಬಹುದು.

“ಅಲ್ಪ ಬುದ್ಧಿ ಪಡೆದವರು ಮಾತ್ರ ‘ಒಬ್ಬ ನನ್ನ ಸಂಬಂಧಿ; ಮತ್ತೊಬ್ಬ ಪರಕೀಯ’ ಎಂದು ಭೇದಭಾವ ಮಾಡುತ್ತಾರೆ: ಉದಾರ ಹೃದಯಿಗಳು ಇಡೀ ಪ್ರಪಂಚವನ್ನೇ ತಮ್ಮ ಕುಟುಂಬವನ್ನಾಗಿ ಕಾಣುತ್ತಾರೆ.” – ಮಹಾ ಉಪನಿಷತ್, ಅಧ್ಯಾಯ ೬, ಚರಣ ೭೨.